ಮುಖಪುಟ
ಪಿರಮಿಡ್ ಮೆಡಿಟೇಶನ್ ಚಾನೆಲ್ ಕುರಿತು...
ಪಿ.ಎಂ.ಸಿ (ಪಿರಮಿಡ್ ಮೆಡಿಟೇಶನ್ ಚಾನಲ್) ಒಂದು ಅನನ್ಯ ಧ್ಯಾನ ಮಾರ್ಗವಾಗಿದೆ.. ಇದು ವಿಶ್ವದಲ್ಲೇ ಮೊದಲನೆಯದಾಗಿದ್ದು .. 2018ರಲ್ಲಿ ಸ್ಥಾಪನೆಯಾಗಿದೆ. ಸಾರ್ವತ್ರಿಕ ಆಧ್ಯಾತ್ಮಿಕ ಸತ್ಯಗಳನ್ನು, ಸಕಾರಾತ್ಮಕ ಮಾಧ್ಯಮಗಳ ಮೂಲಕ ಇಡೀ ಮನುಕುಲಕ್ಕೆ ತಲುಪುವಂತೆ ಉದ್ದೇಶಿಸಿ
ಪಿ.ಎಂ.ಸಿ ಕನ್ನಡ ಚಾನಲ್ ಸ್ಥಾಪಿಸಲಾಗಿದೆ. ಪಿರಮಿಡ್ ಮೆಡಿಟೇಷನ್ ಚಾನಲ್ ಶಾಂತಿಯುತ ಧ್ಯಾನ ಜಗತ್ತನ್ನು ಸ್ಥಾಪಿಸುವ ಆಶಯವನ್ನು ಹೊಂದಿದೆ. ಪ್ರತಿಯೊಬ್ಬ ಮನುಷ್ಯನನ್ನು ಬುದ್ಧನನ್ನಾಗಿ ಮಾಡಲು ಪಿಎಮ್ಸಿ ಉದ್ದೇಶಿಸಿದೆ.
ಪಿ.ಎಂ.ಸಿ” ಕನ್ನಡ ಚಾನಲ್ ೨೦೨೦ನೆ ವರ್ಷದಲ್ಲಿ ವೆಬ್ ಆಧಾರಿತ ಚಾನಲ್ ಆಗಿ ಪ್ರಾರಂಭವಾಗಿ, ೪೮,೦೦೦ಕ್ಕಿಂತಾ ಹೆಚ್ಚು ಚಂದಾದಾರರನ್ನು ಒಳಗೊಂಡು, ೪೦,೦೦೦೦೦ಕ್ಕೂ ಹೆಚ್ಚಿನ ವೀಕ್ಷಣೆಗಳೊಂದಿಗೆ ಸುಮಾರು ೨೦ ದೇಶಗಳಲ್ಲಿ ಹರಡಿದೆ.
ಮೈತ್ರೇಯ ಬುದ್ಧಾ ಮೀಡಿಯಾ ಲಿಮಿಟೆಡ್ ಅವರು ಪಿ.ಎಂ.ಸಿ” ಕನ್ನಡ ಚಾನಲ್ನ ಪ್ರಧಾನ ಕಚೇರಿಯನ್ನು ಕರ್ನಾಟಕದ ಬೆಂಗಳೂರು ನಗರದಲ್ಲಿ ಪ್ರಾರಂಭಿಸಿದ್ದಾರೆ. ಪಿ.ಎಂ.ಸಿ ಕನ್ನಡ” ಒಂದು ಪರಿವರ್ತಕ ಮಾಧ್ಯಮವಾಗಿದ್ದು, ಅದು ಸತ್ಯವನ್ನು ಇದ್ದಂತೆ” (Truth as it is) ಪ್ರಸ್ತುತಪಡಿಸುತ್ತದೆ. ಕಳೆದ ೩೦ ವರ್ಷಗಳಿಂದ, ಲಕ್ಷಾಂತರ ಪಿರಮಿಡ್ ಮಾಸ್ಟರ್ ಗಳು ನೀಡಿದ ಆಧ್ಯಾತ್ಮಿಕ ಸೇವೆಗಳನ್ನು ಪಿ.ಎಂ.ಸಿ ತೋರಿಸುತ್ತದೆ.
ಪಿ.ಎಂ.ಸಿ ಕನ್ನಡ” ಎಂಬುದು ಹಿಂದಿನ ಮತ್ತು ಪ್ರಸ್ತುತ ಕಾಲದ ಅನೇಕ ಆಧ್ಯಾತ್ಮಿಕ ಗುರುಗಳ ಸಂದೇಶಗಳ ಮೂಲಕ ಆಧ್ಯಾತ್ಮಿಕತೆ ಮತ್ತು ಸಮಗ್ರ ಬದುಕಿನ ಬಗ್ಗೆ ಸತ್ಯಗಳನ್ನು ಹರಡಲು ಒಂದು ಅಸ್ತ್ರವಾಗಿದೆ. ಇವರ ಜೀವನ ಚರಿತ್ರೆಗಳು ಪ್ರಪಂಚದಾದ್ಯಂತದ ಜನ ಸಾಮಾನ್ಯರಿಗೆ ಕಣ್ಣು – ತೆರೆಸುವ ಯಶಸ್ಸಿನ ಕಥೆಗಳಾಗಿರುತ್ತವೆ.
ಪಿ.ಎಂ.ಸಿ ಕನ್ನಡ” ಎಲ್ಲಾ ಪಿರಮಿಡ್ ಮಾಸ್ಟರ್ ಗಳ ಧ್ವನಿ. ಆನಾಪಾನಸತಿ ಧ್ಯಾನದ ಮಹತ್ವವವನ್ನು, ಸಸ್ಯಾಹಾರದ ಪ್ರಾಮುಖ್ಯತೆಯನ್ನು, ಪಿರಮಿಡ್ ಉಪಯೋಗಗಳನ್ನು ಹಾಗು ಆಧ್ಯಾತ್ಮಿಕ ಸತ್ಯಗಳನ್ನು ಜಗತ್ತಿನಾದ್ಯಂತ ಹರಡಲು ಉದ್ದೇಶಿಸಿದೆ.
ಪಿ.ಎಂ.ಸಿ ಕನ್ನಡ” ಚಾನಲ್ ಈಗ ಮತೊಂದು ಹೆಜ್ಜೆ ಮುಂದೆಹಾಕಿ ಕರ್ನಾಟಕದ ಎಲ್ಲಾ ಮನೆ-ಮನಗಳಿಗೆ ಕೇಬಲ್ ನೆಟ್ ವರ್ಕ್ಸ್ ಮುಕಾಂತರ ತಲುಪುತ್ತಾ ಎಲ್ಲರ ಮೆಚ್ಚುಗೆಯನ್ನು ಪಡೆಯುತ್ತಿದೆ. ಇದಕ್ಕೆ ಸಹಾಯ ಸಹಕಾರಗಳನ್ನು ನೀಡುತ್ತಿರುವ ಎಲ್ಲಾ ಪಿರಮಿಡ್ ಮಾಸ್ಟರ್ ಗಳಿಗೆ, ಚಾನೆಲ್ನ ಪ್ರಾಮುಖ್ಯತೆಯನ್ನುಅರ್ಥಮಾಡಿಕೊಂಡು ಪಿ.ಎಂ.ಸಿ ಕನ್ನಡ” ಚಾನಲ್ ನ ಕಾರ್ಯಕ್ರಮಗಳನ್ನು ಮನೆಮೆನೆಗೆ ತಲುಪಿಸುತ್ತಿರುವ ಎಲ್ಲಾ ಕೇಬಲ್ ನೆಟ್ ವರ್ಕ್ ಆಪರೇಟರ್ ಗಳಿಗೆ ಹೃತ್ಪೂರ್ವಕ ಧನ್ಯವಾದಗಳು.